Posts

ಬುತ್ತಿ ರೊಟ್ಟಿ

ಹಳ್ಳಿಯ ಇನ್ನೊಂದು ಸೊಗಡು *ಬುತ್ತಿ-ರೊಟ್ಟಿ* ಏನಿದು ಬುತ್ತಿ-ರೊಟ್ಟಿ?  ಗ್ರಾಮಗಳಲ್ಲಿ ಈ ತರಹದ ಒಂದು ಆಚರಣೆ ಇದೆ. ನಗರದ ಜನಕ್ಕೆ ಈ ಒಂದು ಪದ್ಧತಿ/ಆಚರಣೆ ತಿಳಿದಿಲ್ಲ. ಇದರ ಮಹತ್ವ ತಿಳಿಯಲು ಗ್ರಾಮದ ಹಿರಿಯ ಜೀವಿಯೊಬ್ಬರನ್ನು ಪ್ರಶ್ನೆ ಕೇಳಿದೆ. ಅಬ್ಬಾ ಎಂಥಾ ಅರ್ಥ ಗರ್ಭಿತ ಮತ್ತು ಸುಂದರ ವ್ಯವಸ್ಥೆ ಇದು ಎಂದು ತಿಳಿದು ಬಂತು. ಏನಿದು * ಬುತ್ತಿ-ರೊಟ್ಟಿ* ಆಚರಣೆ ? ಗ್ರಾಮದಲ್ಲಿ , ಮನೆಗೆ ಹೆಣ್ಣು/ ಗಂಡು ಮಕ್ಕಳು ಮದುವೆ ಸಮಾರಂಭದಲ್ಲಿ, ಮಗಳು ಹೆರಿಗೆಯಾದ ಸಂತೋಷದ ವಿಚಾರ ವಿರಲಿ,  ಸೊಸೆ ಮತ್ತು ಮೊಮ್ಮಗು ಮೊದಲ ಬಾರಿಗೆ ಹೆರಿಗೆ ನಂತರ ಮನೆಗೆ ಬಂದಾಗ (ಹೆತ್ತಿಬಣ), ಯಾವುದೇ ಕಾರ್ಯಗಳನ್ನು ಹಮ್ಮಿಕೊಂಡ ನಂತರ ಅಥವಾ ದೇವ ಕಾರ್ಯವಾದ ನಂತರ ಅಕ್ಕ ಪಕ್ಕದ  ಗಲ್ಲಿಗಳಲ್ಲಿನ ಎಲ್ಲಾ ಮನೆಗಳಿಗೆ ಹೋಗಿ ಒಂದು *ರೊಟ್ಟಿ*, *ಒಂದು ಚಪಾತಿ*, *ಕಾಳು ಪಲ್ಯ*, *ಬದನೆಕಾಯಿ ಪಲ್ಯ*, *ಬುತ್ತಿ*, *ಕರ್ಚಿಕಾಯಿ 2*, *ಪುಡಿ ಚಟ್ನಿ* ಎಲ್ಲವನ್ನು ಪ್ರತಿ ಮನೆಗೆ ತೆರಳಿ, ಕೊಟ್ಟು ಸಂತಸ ಹಂಚಿಕೊಳ್ಳುವ ವಾಡಿಕೆ ಇದು. ಈ ಆಚರಣೆಯ ಹಿಂದೆ ಇರುವ ಚಿಂತನೆ, *ನಮ್ಮ ಮನ ಮತ್ತು ಮನೆಯಲ್ಲಿ  ಸಂಭ್ರಮದ ವಾತಾವರಣ ಇದೆ, ಎಲ್ಲ ನೆಂಟರು ಬಂದು ವಿಧವಿಧ ಪಕ್ವಾನ ಮಾಡಿ ತಂದಿರುವರು, ನಮ್ಮ ಸಂತಸದಲ್ಲಿ ನೀವು ಕೂಡ ಭಾಗಿ ಯಾಗಿರಿ, ಅಕ್ಕ ಪಕ್ಕದ ಜನರು ಯಾರೂ ಹಸಿವೆಯಿಂದ ಮಲುಗಬಾರದು, ಹೊಟ್ಟೆ ಕಿಚ್ಚು/ಅಸೂಯೆ/ಖಿನ್ನತೆಗಳು ಸಹ ಮೂಡದಿರಲಿ. ಹೊಟ್ಟೆ ಶಾಂತವ...

ಕಾಲು ಕಟ್ಟಿದ ಆನೆ:

ಕಾಲು ಕಟ್ಟಿದ ಆನೆ:  ಇಂ ಗ್ಲೀಷ್ ನಿಂದ ಕನ್ನಡಕ್ಕೆ‌ ಅನುವಾದ. ಲೇಖನ: ಅಮಿತ ಕುಲಕರ್ಣಿ 9972591014 ದೂರದ ಒಂದು ಕ್ಯಾಂಪಿನಲ್ಲಿ (ತಾಂಡಾದಲ್ಲಿ) ಕೆಲವು ಆನೆಗಳನ್ನು ಚಿಕ್ಕ ಸರಪಳಿಯ ಮೂಲಕ ಕಟ್ಟಿ ಸಾಕಿದ್ದರು. ಒಬ್ಬ ದಾರಿ ಹೋಕ, ಎಲ್ಲ ಆನೆಗಳನ್ನು ಗಮನಿಸುತ್ತ ನಿಂತುಕೊಂಡು ವಿಚಾರ ಮಾಡ ತೊಡಗಿದ, "ಅಲ್ಲಾ !! ಆನೆಯನ್ನು ದೊಡ್ಡ ಬೋನಿನಲ್ಲಿ (ಪಂಜರದಲ್ಲಿ) ಯಾಕೆ ಇಟ್ಟಿಲ್ಲಾ, ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದಾರೆ? ಎಂಬ ಪ್ರಶ್ನೆ ತೀವ್ರವಾಗಿ ಕಾಡತೊಡಗೊತು, ಮತ್ತು ಆನೆಗಳು ಏಕೆ ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ, ಎಂಬ ಎರಡನೇ ಪ್ರಶ್ನೆ ಕಾಡತೊಡಗಿತು. ಆತಾ ದೂರದಲ್ಲಿದ್ದ ಒಬ್ಬ ಮಾವುತನನ್ನು ಕೇಳಲು ಮುಂದಾದನು. "ಹೇ, ಮಾವುತ ರಾಜಾ, ಏನಿದು ರಹಸ್ಯ ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದೀರಾ? ಅವುಗಳು ಬಿಡಿಸಿಕೊಂಡು ಓಡಲು ಪ್ರಯತ್ನ ಮಾಡಬಹುದಲ್ಲ. ಚಿಕ್ಕ ಸರಪಳಿಯನ್ನು ಬಿಡಿಸಿಕೊಳ್ಳಲು ಎಷ್ಟು ಹೊತ್ತು ಬೇಕು... ಅದರಿಂದ ಪ್ರಾಣಾಪಾಯ ವಾದರೆ? ಎಂದು ಉದ್ಗಾರ ತೆಗೆದ ದಾರಿ ಹೋಕ. ಮಾವುತ ಹೇಳಿದ, " ನೋಡಿ, ಅವುಗಳನ್ನು ನಾವು ಚಿಕ್ಕದಿರುವಾಗಲೇ, ಅದೇ ಚಿಕ್ಕ ಸರಪಳಿಯಿಂದ ಕಟ್ಟಿರುತ್ತೇವೆ, ಮತ್ತು ಆ ಸರಪಳಿ ಸಾಕು ಆ ವಯಸ್ಸಿಗೆ, ಬೆಳೆಯುತ್ತ ಬೆಳೆಯುತ್ತ ಅವು ಮಾನಸಿಕವಾಗಿ ಆ ನಂಬಿಕೆಯನ್ನು ದೃಢ ಮಾಡಿಕೊಳ್ಳುತ್ತವೆ. *"ನಮಗೆ ಈ‌ ಸರಪಳಿಯಿಂದ ತಪ್ಪಿಸಿಕೊಳ್...

ಶಗಣಿ ತಿನ್ನು ಕೆಲಸ ಮಾಡಿದ್ಯಾ...

ಶಗಣಿ ತಿನ್ನು ಕೆಲಸ ಮಾಡಿದ್ಯಾ... ಲೇಖನ: ಅಮೀತ ಕುಲಕರ್ಣಿ ೯೯೭೨೫೯೧೦೧೪ ಭಾರಿ ಸ್ವಾರಸ್ಯಕರ ವಿಚಾರ ನಿಮ್ಮ ಜೊಡಿ ಹಂಚ್ಕೊಳಾಕತ್ತಿನಿ. ಶೀರ್ಷಿಕೆ ಖತರ್ನಾಕ ಐತಿ, ತಪ್ಪ ತಿಳಿಬ್ಯಾಡ್ರಿ, ಶಗಣಿ ಅಂದ್ರ ನ ಆಧ್ಯಾತ್ಮ. ಶಗಣಿ ಇದ್ರ ನಮ್ಮ ಬದುಕು ಹಸನ, ನೆಮ್ಮದಿ, ಆರೋಗ್ಯ ಸದೃಢ. ಭಾಳ ಇಂಟ್ರೆಸ್ಟಿಂಗ ಐತ್ರಿ, ಪೂರ್ತಿ ಓದ್ರಿ ಮತ್ತ.... ಯಾಕ ನಮ್ಮ ಹಿರಿಯರು ಹಿಂಗ ನಮಗ ಬೈತಿದ್ರು... ದೊಡ್ಡ ತಪ್ಪ ಮಾಡಿದ್ರ ಬೈತಿದ್ರು, "ಶಗಣಿ ತಿನ್ನು ಕೆಲಸಾ ಮಾಡಿದ್ಯಾ"... ನಾನಂತು ಬೈಸಿಕೊಂಡಿನಿ... ಗಣಿತ ವಿಷಯ ಫೇಲ ಆದಾಗ ನಮ್ಮ ಅಪ್ಪಾ ಬೈದಿದ್ರು.. ಹೋಗಿ ಕತ್ತಿ ಕಾಯಿ ಮತ್ತು ಶಗಣಿ ತಿನ್ನು... ಅವರಿಗೆ ಆ ಸಮಯದಾಗ ತೋಚಿದ ಬೈಗುಳ ಅದು ಅಂತ ನನಗ ಅನಸ್ತದ. ಮನೋದ್ವೇಗ ದಲ್ಲಿದ್ದಾಗ ಸಾಂಸ್ಕೃತಿಕ ಬೈಗುಳ‌ ಅಂದ್ರ "ಶಗಣಿ ತಿನ್ನು". ಏನ ಟಾಪಿಕ ಪಾ ಅಂದ್ರ್ಯಾ... ಖರೆ ಅದ. ನಾವು ಯಾವುದೇ ಕೆಲಸಾ ಇರಲಿ ನಪಾಸ ಯಾಕ ಆಗ್ತೀವಿ,? ನಾವು ಮಾಡು ಕೆಲಸಾ ಗಡಿಬಡಿ ಮಾಡಿ ಕೆಲಸಾ ಹಾಳ ಮಾಡ್ತಿವಿ, ಅದು ಹಾನಿಯನ್ನು ಉಂಟು ಮಾಡುತ್ತದೆ, ಇಲ್ಲಾ ಅಂದ್ರ ಮುಂದಿನ ಕೆಲಸ ತಡಾ ಆಗ್ತದ... ಹಿಂಗಾಗಿ ಹಿರಿಯರು ದಾನಾ ಕಾಯಿಲಿಕ್ಕೆ ಹೋಗ ಅಥವಾ ಕತ್ತಿ ಕಾಯಿ ಅಂತ ಬೈತಿದ್ರು... ಅದರ ಗೂಢ ಅರ್ಥ " ದನಾ ಅಥವಾ ಕತ್ತೆ" , ಪ್ರಾಣಿಯನ್ನ ಯಥಾವತ್ತಾಗಿ ತೆಗೆದುಕೊಂಡರೆ ಅವುಗಳಿಗೆ *ತಾಳ್ಮೆ* ಬಹಳ ಇರ್ತದ. ಸಮಾಧಾನವಾಗಿ ಅವುಗಳನ್ನ ಮೇಯಿಸ...

ಈ ದಿನದ ಪ್ರೇರಣೆ:

ಈ ದಿನದ ಪ್ರೇರಣೆ : ಒಂದು ಆನೆ ಮತ್ತು ನಾಯಿ ಒಂದೇ ಸಮಯಕ್ಕೆ ಗರ್ಭ ಧರಿಸಿದವು, 63 ದಿನ ಗತಿಸಿದವು, ನಾಯಿಯು 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಮತ್ತೆ ಕೆಲ ದಿನಗಳ ನಂತರ ಮತ್ತೆ ಗರ್ಭ ಧರಿಸಿತು ನಾಯಿ, ಮುಂದಿನ 63 ದಿನಗಳಿಗೆ ಮತ್ತೆ 4 ಮುದ್ದಾದ ನಾಯಿ ಮರಿಗಳನ್ನು ಹಾಕಿತು, ಹಾಗೆಯೇ ಒಟ್ಟು ೧ ಡಜನ್ ನಾಯಿ ಮರಿ ಹಾಕಿದ ನಾಯಿ ಮರಿ, ಆನೆಗೆ ಕೇಳಿತಂತೆ, "ನಾನು ಮತ್ತು ನೀನು ಒಂದೇ ಸಾರಿ ಗರ್ಭ ಧರಿಸಿದ್ದು ನಿಜವಲ್ಲವೇ, ಮೊದಲ ೪ ನಾಯಿಮರಿಗಳು ಆಗಲೇ ದೊಡ್ಡ ನಾಯಿಗಳಾಗಿ ಓಡಾಡತಾ ಇದಾವೆ, ನಿನ್ನದೇನು ಕತೆ? ಅಂತ ಕೇಳಿದಾಗ, ಆನೆ ಉತ್ತರಿಸಿತು: ಒಂದು ವಿಷಯ ಹೇಳ್ತೆನೆ ಗಮನಿಸು, ನಾನು ೨ ವರ್ಷಕ್ಕೊಮ್ಮೆ ಗರ್ಭ ಧರಿಸ್ತಿನಿ, ಆದರೆ ನಾಯಿಯನ್ನ ಹೆರೋದಿಲ್ಲ, ನಾನು ಆನೆಯನ್ನೆ ಹೆರುತ್ತೇನೆ, ಆ ಗರ್ಜನೆ ಆ ಪ್ರಕಾರವನ್ನು ನೋಡಲು ಜನರು ಸಾಲು ಸಾಲಾಗಿ ನಿಲ್ಲುತ್ತಾರೆ, ನಾವು ದಾರಿಯಲ್ಲಿ ಹೊರಟರೆ ಜನರು ಮೂಕ ವಿಸ್ಮಿತರಾಗಿ ನೋಡುತ್ತಾರೆ. ಹಾಗಾಗಿ ನಾನು ಹೆರುವುದು ಬೃಹತ್‌ ಮತ್ತು ತೂಕವಿರುವ ವ್ಯಕ್ತಿತ್ವವನ್ನು. ನಾಯಿಗೆ ಹೋಲಿಸ ಬೇಡ." ಗಮನಿಸಿದರಾ ಗೂಡಾರ್ಥವನ್ನು!, ೧. ಬೆರೆಯವರ ಪ್ರಾರ್ಥನೆ ಈಡೇರಿದಾಗ ನೀವು ಸಣ್ಣಾಗದಿರಿ, ೨. ಬೇರೆಯವರಿಗೆ ಬೆಕಾಗಿರುವುದು ಸಿಕ್ಕಿದ್ದಕ್ಕೆ ಹೊಟ್ಟೆ ಕಿಚ್ಚು ಬೇಡಾ, ೩. ಭಗವಂತನ ಸನ್ನಿಧಾನದಲ್ಲಿ ನಂಬಿಕೆ ಇಟ್ಟರೆ, ನಿಮ್ಮ ಕಾರ್ಯವನ್ನು ಜಗತ್ತೆ ಮೆಚ್ಚುತ್ತದೆ, ಮತ್ತು ಅದರ ಪರಿಣಾಮ ದೂರಗಾಮಿ ...

ಪಾಶ್ಚಿಮಾತ್ಯರು ಕಂಡ ಕೃಷಿ

 ಏಕೆ ಕೃಷಿ ಇಲಾಖೆಗಳು ಏಕ ಬೆಳೆ ಪಧ್ಧತಿಗೆ ಒತ್ತು ಕೊಡುತ್ತವೆ ಅನ್ನೋದಕ್ಕೆ ಇಲ್ಲಿದೆ ಈ ಬೈಬಲ್ ನಲ್ಲಿನ ವಿಚಾರ... ಸರಿಯೋ ತಪ್ಪೋ ನಾವೇ ವಿಚಾರ ಮಾಡುವ ಸಂಗತಿ. ಅದು ಸರಿ ಅನಿಸಿದವರಿಗೆ ಸರಿ, ತಪ್ಪು ಅನ್ನಿಸಿದವರು ಸರಿ ಪಡಿಸಿಕೊಳ್ಳೊಣ. ಅಕ್ವಿಲಾ ಕ್ಯಾರೆನ್, ಅವರ ಸಂವಾದ ಗಮನವಿಟ್ಟು ಕೇಳಿಸಿಕೊಳ್ಳಿ, ಎಸು ಭಗವಾನರ ಚಿಂತನೆಗಳೊಂದಿಗೆ ಕೃಷಿ ಪಧ್ಧತಿ ಯನ್ನೂ ಕೂಡ ಅವರು ಪ್ರತಿಪಾದಿಸಿದ ಉಲ್ಲೇಖ ಬೈಬಲ ನಲ್ಲಿ ಸಿಗುತ್ತದೆ. ಪಶ್ಚಿಮದಲ್ಲಿ ಏಸು ಭಗವಾನರು ಈ ವಿಷಯ ಅಂದರೆ (ಏಕ ಬೆಳೆ ಪದ್ದತಿ) ಗೆ, ಒತ್ತು ಕೊಟ್ಟು ಹೇಳಿದರು, ಪಾಶ್ಚಿಮಾತ್ಯರು ಪಾಲಿಸಿದರು. ಕಾರಣ ನೂರು ಇರಬಹುದು, ಆದರೆ ಅದನ್ನು ಅಧ್ಯಯನ ಮಾಡಿ ಬಂದ ಭಾರತೀಯ ಕೃಷಿ ತಜ್ಞರು ಅದೇ ಪದ್ಧತಿಯನ್ನು ಭಾರತದಲ್ಲಿ ಪ್ರತಿಪಾದಿಸಿದರು ಎಂಬುದು ಪ್ರಸ್ತುತ ಕಂಡು ಬರುತ್ತದೆ. ನಮ್ಮ ಭಾರತೀಯ ಕೃಷಿ ಪಧ್ಧತಿಯಲ್ಲಿ ವಿವಿಧತೆ ಅಂದರೆ ಮಿಶ್ರ ಬೆಳೆ ಪಧ್ಧತಿ ಇತ್ತು, ಆದರೆ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ಬೆಳೆ, ಮಳೆ, ನೆಲ, ಜಲ, ಸಂಪನ್ಮೂಲಗಳ ಬಳಕೆ, ದುರ್ಬಳಕೆ ಯ ಉದಾಹರಣೆ ಇನ್ನೂ ಕಾಣ ಸಿಗುತ್ತವೆ. ಬೇಡಿಕೆ ಗಿಂತ ಅಧಿಕ ಉತ್ಪಾದನೆ ಮಾಡುವುದು ಮತ್ತು ಅಧಿಕ ಬೇಡಿಕೆ ನಿರ್ಮಾಣ ಮಾಡುವುದು, ಅದನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡುವುದು, ಅದಕ್ಕೆ (ಡೈನಾಮಿಕ ಮಾರ್ಕೆಟಿಂಗ್) ಎಂಬ ಹೆಸರು ಕೊಟ್ಟು ನಮ್ಮ ಯುವಕರನ್ನೂ ದಾರಿ ತಪ್ಪಿಸಿದ ಉದಾಹರಣೆಗೆ ಕಾಣ ಸಿಗುತ್ತದೆ. ಇವೆಲ್ಲವನ್ನೂ ನಾವು...

ಮಣ್ಣಿನಿಂದಾದ ಈ ಶರೀರ

ಲೇಖನ: ಅಮೀತ ಕುಲಕರ್ಣಿ ೯೯೭೨೫೯೧೦೧೪ ಮೊದಲು ಗರ್ಭಿಣಿಯರಿಗೆ ಒಂದು ಚಿಟಿಗೆ ಕೆಂಪು ಮಣ್ಣು ತಿನ್ನಲು ಹೇಳುತ್ತಿದ್ದರು. ಯಾಕಿರಬಹುದು ಹೇಳಿ? ಮಕ್ಕಳು ಕೆಂಪು ಹುಟ್ಟಲಿ, ಮಕ್ಕಳ ಬಣ್ಣ ಛಂದ ಆಗಲಿ ಅಂತ ಹೇಳ್ತಿದದನ್ನು ಕೇಳೀವಿ, ಯಾಕಿರಬಹುದು? ಬಹಳ ಸ್ವಾರಸ್ಯಕರ ವಿಚಾರ ನಿಮಗ ತಿಳಿಸ್ತಿನಿ‌. ಒಂದು ಮದುವಿ ವಳಗ ನಾನು ನಮ್ಮ ಕಾಕಾ (ಚಿಕ್ಕಪ್ಪ) ಹರಟಿ ಹೊಡಕೊತ ಕೂತಿದ್ವಿ, ಒಂದು ಹುಡುಗಿ ಕೆಂಪು ಮೈ ಬಣ್ಣ ದಾಕಿದ್ಲು, ಏನ್ವಾ ಫೇರ್ & ಲೌಲಿ ಭಾಳ ಹಚ್ಕೊಂಡಂಗದ ಅದ ಅಂದೆ, ಆ ಹುಡುಗಿ ಇಲ್ರಿ ನಮ್ಮವ್ವ ಡೆಲಿವರಿ ಟೈಮ ನಾಗ ಕೆಂಪ ಮಣ್ಣು ತಿಂದಿದ್ಲಂತ ಅಂತ ಹೇಳಿ ನಕ್ಕೊತ ಹೋದ್ಲು... ಆ ವಿಚಾರ ಅವತ್ತಿಂದ ನನ್ನ ತಲಿ ಕೊರಿಲಿಕ್ಕತ್ತಿತ್ತು. ಆಗ, ಕಾಮಿಡಿ ಅಂತ ನಾನು‌ ನಕ್ಕು ಸುಮ್ಮನಾಗಿದ್ದೆ, ಆದ್ರ ಕೆಲವು ದಿನದ ಹಿಂದ ಹಳ್ಯಾಗ (ಹಳ್ಳಿ ಒಳಗ) ಒಬ್ಬ ಹೆಣ್ಣು ಮಗಳ ೫ ತಿಂಗಳ ಗರ್ಭಿಣಿ ದವಾಖಾನಿಗೆ ಬಂದಿದ್ಲು, ಹೊಟ್ಟಿ ಝಾಡಸ್ತದ ಅಂತ ಹೇಳಿದ್ಲು... ಡಾಕ್ಟರ್ ಪ್ರಶ್ನೆ ಕೇಳಿದ್ರು "ಬ್ಯಾರೆ ಏನರ ತಿಂದಗಿಂದಿ ಏನು? ", ಆಕಿ ಹೇಳಿದ್ಲು, "ನಮ್ಮ ಅವ್ವ ಮಣ್ಣ ತಂದಿದ್ಲರಿ, ನಾನು ತಿಂದಿನ್ರೀ. ಡಾಕ್ಟರ ಕೇಳಿದ್ರು ಎಷ್ಟು ತಿಂದಿ ವಾ? ಆಕಿ, "ಘಮ ಘಮ ವಾಸ ಬಂತ್ರ್ಯಾ ೨ ಚಮಚೆ ತಿಂದೆ", ಅಂತ ನಾಚಕೊತ್ತ ಹೇಳಿದ್ಲು... ಭಾರಿ ಕೆಲಸಾ ಮಾಡಿ ಬಿಡವಾ ಅಂದ ಡಾಕ್ಟರ್, " ನೋಡ ತಂಗಿ, ಒಂದ ಮಾತ ಖರೇ ಹೇಳ ಬೇಕಂದ್ರ , ನಿನ್...

ಭಾಳ ಮಂದಿ ಆಗ್ರೀ...

ನಾವು ಹಳ್ಳಿಯಿಂದ ಬಂದವರು, ಆದರೆ ನಗರದ ಭವ್ಯ ಸೊಬಗಿನೊಳಗೆ ನಮ್ಮ ಗ್ರಾಮ್ಯ ಮೂಲವನ್ನು ಮರೆತ್ತಿದ್ದೇವೆ, ಅಥವಾ ಮರೆಯುತ್ತಿದ್ದೇವೆ. ರಾಷ್ಟ್ರವನ್ನು ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸೂಕ್ಷ್ಮ ಆರ್ಥಿಕ ನಿಲುವುಗಳಲ್ಲಿ ಗ್ರಾಮಗಳನ್ನು ಇಟ್ಟುಕೊಂಡೇ ನಿರ್ಣಯವನ್ನು ತೆಗೆದುಕೊಂಡಿರುತ್ತಾರ.  ಗ್ರಾಮಗಳಲ್ಲಿ ರಾಷ್ಟ್ರದ ಅಭಿವೃದ್ಧಿಯ ಚಿಂತನೆ ಪ್ರಕಟವಾಗದೇ ಇರಬಹುದು, ಆದರೆ ಅವರ ಆಚರಣೆಯಲ್ಲಿ ರಾಷ್ಟ್ರದ ಅಭಿವೃದ್ಧಿಯ ವಿಚಾರ  ಕಾಣಲು ಸಿಗುತ್ತದೆ. ನಗರಗಳಲ್ಲಿ, ನಾವು ಊಟ ಮಾಡುವಾಗ ಮನೆಯ ಬಾಗಿಲ ಹಾಕಿಕೊಂದು ಊಟ ಮಾಡುತ್ತೇವೆ, ಅದು ನಮಗೆ ರೂಢಿ ಆಗಿ ಬಿಟ್ಟಿದೆ. ಆದರೆ ಶರಣರ ಸಂಪ್ರದಾಯದ ನಾಡಾದ ನಮ್ಮ ಕರುನಾಡು, "ಶರಣರ ಬರವೆಮೆಗೆ ಪ್ರಾಣ ಜೀವಾಳವಯ್ಯ" ಎಂಬ ಮೂಲ ವಿಚಾರ, ಮತ್ತು ಮೂಲ ಸಿಧ್ಧಾಂತದಂತೆ ಊಟ ಮಾಡುವಾಗ ಶರಣರ ಪಾಲನ್ನು ತೆಗೆದಿಟ್ಟು ಊಟ ಮಾಡುವದು ವಾಡಿಕೆ ಯಾಗಿದೆ. ಸೂಕ್ಷ್ಮ ವಾಗಿ ಅವಲೋಕಿಸಿ ನೊಡಿದಾಗ, *ಇನ್ನೊಬ್ಬರಿಗೆ ಕೊಟ್ಟು ನಂತರ ನೀನು ತಿನ್ನು* ಎನ್ನುವುದು ಗೂಢಾರ್ಥ. ಗಮನಿಸಬೇಕಾದ ಅಂಶ ಅಂದರೆ, ದೇವರ ಚಿಂತನೆ ಆಮೇಲೆ, ಹಸಿದನನಿಗೆ ಮೊದಲು ಅನ್ನವನ್ನು ಕೊಟ್ಟು ನಂತರ ತಾನು ಊಟಮಾಡಿದರೆ ಪರಮ ಲಾಭ, ಮನೆಗೆ ಹಸಿದುಕೊಂಡು ಬಂದವ, ಅನ್ನವನ್ನು ಕೇಳುವಾಗ ಆ ಧ್ವನಿ "ಅವ್ವಾssssss.... ", " ಎಕ್ಕಾsssss......", ನಮ್ಮ ಮನೆಯಲ್ಲಿ ವಾಸವಾಗಿರುವ ಎಲ್ಲ ಖುಣಾತ್ಮಕ ಶಕ್ತಿಯನ್ನು ಹೊರಗೆಳ...