ಶಗಣಿ ತಿನ್ನು ಕೆಲಸ ಮಾಡಿದ್ಯಾ...
ಶಗಣಿ ತಿನ್ನು ಕೆಲಸ ಮಾಡಿದ್ಯಾ...
ಲೇಖನ: ಅಮೀತ ಕುಲಕರ್ಣಿ
೯೯೭೨೫೯೧೦೧೪
ಭಾರಿ ಸ್ವಾರಸ್ಯಕರ ವಿಚಾರ ನಿಮ್ಮ ಜೊಡಿ ಹಂಚ್ಕೊಳಾಕತ್ತಿನಿ. ಶೀರ್ಷಿಕೆ ಖತರ್ನಾಕ ಐತಿ, ತಪ್ಪ ತಿಳಿಬ್ಯಾಡ್ರಿ, ಶಗಣಿ ಅಂದ್ರ ನ ಆಧ್ಯಾತ್ಮ. ಶಗಣಿ ಇದ್ರ ನಮ್ಮ ಬದುಕು ಹಸನ, ನೆಮ್ಮದಿ,
ಆರೋಗ್ಯ ಸದೃಢ.
ಭಾಳ ಇಂಟ್ರೆಸ್ಟಿಂಗ ಐತ್ರಿ, ಪೂರ್ತಿ ಓದ್ರಿ ಮತ್ತ....
ಯಾಕ ನಮ್ಮ ಹಿರಿಯರು ಹಿಂಗ ನಮಗ ಬೈತಿದ್ರು... ದೊಡ್ಡ ತಪ್ಪ ಮಾಡಿದ್ರ ಬೈತಿದ್ರು, "ಶಗಣಿ ತಿನ್ನು ಕೆಲಸಾ ಮಾಡಿದ್ಯಾ"... ನಾನಂತು ಬೈಸಿಕೊಂಡಿನಿ... ಗಣಿತ ವಿಷಯ ಫೇಲ ಆದಾಗ ನಮ್ಮ ಅಪ್ಪಾ ಬೈದಿದ್ರು.. ಹೋಗಿ ಕತ್ತಿ ಕಾಯಿ ಮತ್ತು ಶಗಣಿ ತಿನ್ನು... ಅವರಿಗೆ ಆ ಸಮಯದಾಗ ತೋಚಿದ ಬೈಗುಳ ಅದು ಅಂತ ನನಗ ಅನಸ್ತದ. ಮನೋದ್ವೇಗ ದಲ್ಲಿದ್ದಾಗ ಸಾಂಸ್ಕೃತಿಕ ಬೈಗುಳ ಅಂದ್ರ "ಶಗಣಿ ತಿನ್ನು".
ಏನ ಟಾಪಿಕ ಪಾ ಅಂದ್ರ್ಯಾ...
ಖರೆ ಅದ. ನಾವು ಯಾವುದೇ ಕೆಲಸಾ ಇರಲಿ ನಪಾಸ ಯಾಕ ಆಗ್ತೀವಿ,?
ನಾವು ಮಾಡು ಕೆಲಸಾ ಗಡಿಬಡಿ ಮಾಡಿ ಕೆಲಸಾ ಹಾಳ ಮಾಡ್ತಿವಿ, ಅದು ಹಾನಿಯನ್ನು ಉಂಟು ಮಾಡುತ್ತದೆ, ಇಲ್ಲಾ ಅಂದ್ರ ಮುಂದಿನ ಕೆಲಸ ತಡಾ ಆಗ್ತದ...
ಹಿಂಗಾಗಿ ಹಿರಿಯರು ದಾನಾ ಕಾಯಿಲಿಕ್ಕೆ ಹೋಗ ಅಥವಾ ಕತ್ತಿ ಕಾಯಿ ಅಂತ ಬೈತಿದ್ರು... ಅದರ ಗೂಢ ಅರ್ಥ " ದನಾ ಅಥವಾ ಕತ್ತೆ" , ಪ್ರಾಣಿಯನ್ನ ಯಥಾವತ್ತಾಗಿ ತೆಗೆದುಕೊಂಡರೆ ಅವುಗಳಿಗೆ *ತಾಳ್ಮೆ* ಬಹಳ ಇರ್ತದ. ಸಮಾಧಾನವಾಗಿ ಅವುಗಳನ್ನ ಮೇಯಿಸಿ, ನೀರು ಕುಡಿಸಿ, ಕರ್ಕೊಂಡು ಬರೋದು ಅಂದ್ರ ದನಾ ಅಥವಾ ಕತ್ತಿ ಕಾಯವಂಗ ಬಹಳ ಪೇಶಂಸ (ತಾಳ್ಮೆ) ಗುಣ ಬಂದಿರತದ. ಆ ಗುಣ ಯಾವುದೇ ಕೆಲಸ ಮಾಡಬೇಕಾದ್ರ ಒಬ್ಬ ಮನುಷ್ಯ ಗ ತಾಳ್ಮೆ ಬೇಕೆ ಬೇಕು, ಆವಾಗ ಅವ ಯಶಸ್ವೀ ಆಗ್ತಾನಾ...
ಆಮೇಲೆ ಶಗಣಿ ತಿನ್ನುದು ಅಂತ ಬೈಗುಳದ ಹಿಂದಿರುವ ಗೂಡಾರ್ಥ: ನೋಡ್ರಿ ನಾವು ವಿಜ್ಞಾನ ವನ್ನ ನಂಬತೀವಿ ಅನ್ನವರಿಗೂ ಇದರಾಗ ಉತ್ತರ ಸಿಗತದ... ಒಂದು ಆರೋಗ್ಯವಂತ ಆಕಳು, ಬಿಸಲಾಗ ಮೇಯ್ದು ಬಂದಾಗ, ಅದರ ಉತ್ಪಗಳಾದ ಹಾಲು ಮೊಸರು, ಸೆಗಣಿ, ಮೂತ್ರ ಎಲ್ಲವೂ ವನಸ್ಪತಿಯ ಶಕ್ತಿಯ ಆಗರ ಆಗಿರ್ತಾವ. ಹಾಲು ಪೌಷ್ಟಿಕಾಹಾರ ಎಂದು ವಿಜ್ಞಾನ ನಂಬಿದೆ, ಗೋ-ಮಯ ದಲ್ಲಿ ಸೂಕ್ಷ್ಮ ಪೋಷಕ ತತ್ವ ಗಳು ಇರ್ತವೆ ಅಂತ ವಿಜ್ಞಾನ ಒಪ್ಪಿದೆ, ಮೂತ್ರ ಅಂದರೆ ಯುರಿಕ್ ಅಸಿಡ ಅದು ಮೆಡಿಕೇಟೆಡ (ಔಷಧೀಯ) ಗುಣ ಉಳ್ಳದ್ದು ಎಂಬುದನ್ನೂ ಸಹ ವಿಜ್ಞಾನ ಒಪ್ಪುತ್ತದೆ. ಹಾಗಿದ್ದಾಗ ಅವನ್ನು ಸ್ವೀಕಾರ ಯಾಕ ಮಾಡಬೇಕು ಎಂಬ ವಿಚಾರ ಬಂದಾಗ, ವಿಜ್ಞಾನ ಹೇಳ್ತದೆ, ಮನುಷ್ಯನ ಕರುಳಿನಲ್ಲಿ ಒಂದು ಪಾಚನ ಕ್ರಿಯೆಗೆ ಬೇಕಾಗುವ ಬ್ಯಾಕ್ಟೀರಿಯಾ ಇರ್ತವೆ, ಅವು ತಿಂದ ಆಹಾರವನ್ನು ಸರಿಯಾಗಿ ವಿಂಗಡಿಸಿ (ವಿದಳನ) ಮಾಡಿ ಪೌಷ್ಟಿಕಾಂಶ, ಅನ್ನಾಂಗ, ಖನಿಜ, ಲವಣಗಳನ್ನು ಬೇರ್ಪಡಿಸಿ ದೇಹಕ್ಕೆ ಬೇಕಾದ ಪ್ರಮಾಣ ವನ್ನು ವದಗಿಸುವ ಕೆಲಸ ಮಾಡುತ್ತವೆ, ನಾವು ತಿಳಿಯದೆ antibiotics, ತೆಗೆದುಕೊಂಡು ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ, ಅವುಗಳ ಸಂತತಿ ಕ್ಷೀಣ ಗೊಂಡಾಗ ನಮ್ಮ ಪಾಚನ ತಂತ್ರ ಹದಗೆಡುತ್ತದೆ, ಅದು ಹದಗೆಟ್ಟಾಗ ಮಾತ್ರ ನಮ್ಮ ಎಲ್ಲ ಶಕ್ತಿ ಯನ್ನು ಆ ನೋವಿನಲ್ಲಿ ಕೇಂದ್ರೀಕರಿಸುತ್ತೇವೆ, ಹಿಂಗಾಗಿ ಯಾವ ಕೆಲಸಾನೂ ನೆಟ್ಟಗ ಮಾಡಂಗಿಲ್ಲ. ಕೆಲಸ ಹದಗೆಟ್ಟರೆ ಅದು Cost (ಖರ್ಚು) ಜಾಸ್ತಿ ಆಗ್ತದ.
ಹಿಂಗಾಗಿ, ಹಿರಿಯರು ಪಂಚಗವ್ಯ ( ಹಾಲು, ಮೊಸರು, ತುಪ್ಪ, ಗೋಮಯ, ಮತ್ತು ಗೋಮೂತ್ರ) ಸ್ವೀಕರ ಮಾಡಲು ಹೇಳ್ತಿದ್ರು, ಇವುಗಳ ಒಂದು ಪ್ರಮಾಣ ನಾವು ಸ್ವೀಕಾರ ಮಾಡಿದ್ದೇ ಆದ್ರ ಆ ಬ್ಯಾಕ್ಟೀರಿಯಾ ಗಳು ಮತ್ತೆ ಹುಟ್ಟಿಕೊಳ್ಳುತ್ತವೆ, ಜೊತೆಗೆ ನಮ್ಮ ವಿಚಾರ ಶಕ್ತಿಯ ಅಭಿವೃದ್ಧಿ ಆಗಲಿಕ್ಕೆ ಸಾದ್ಯವಾಗ್ತದೆ.
ಸಾಧು ಸಂತರು ಆಹಾರವನ್ನ ಒಂದು ಪ್ರಮಾಣದಲ್ಲಿ ಸ್ವೀಕಾರ ಮಾಡ್ತಾರ, ಹಿಂಗಾಗಿ ಅವರಿಗೆ ಸಾತ್ವಿಕ ವಿಚಾರ ಬರ್ತವ. ಯಾವಗ ನಾವು ಉತ್ತೆಜಕ (stimulants) ಆಹಾರ ಸ್ವೀಕಾರ ಮಾಡ್ತಿವಿ ಆವಾಗ ಅಮಾನುಷ ಕೆಲ್ಸಾ ಮಾಡ್ತಿವಿ. ಕ್ರೋಧ, ಮದ, ಮಾತ್ಸರ ಅನ್ನುವ ಚಿಂತನೆಗಳ ಕು-ಕರ್ಮಗಳನ್ನ ಮಾಡ್ತಿವಿ.
ಹಿಂಗಾಗಿ ಹಿರಿಯರು ಹೇಳ್ತಿದ್ದರ "ಶಗಣಿ ತಿನ್ನು ಕೆಲಸಾ ಮಾಡಿದ್ಯಾ ಅಂತ", ನೋಡ್ರಿ ಹೆಂತ ಸುಂದರ ವಿಚಾರ.
ಶೇರ ಮಾಡ್ತಿರೀ ಆಲಾ?
Comments
Post a Comment