Posts

Showing posts from February, 2021

ಮಣ್ಣಿನಿಂದಾದ ಈ ಶರೀರ

ಲೇಖನ: ಅಮೀತ ಕುಲಕರ್ಣಿ ೯೯೭೨೫೯೧೦೧೪ ಮೊದಲು ಗರ್ಭಿಣಿಯರಿಗೆ ಒಂದು ಚಿಟಿಗೆ ಕೆಂಪು ಮಣ್ಣು ತಿನ್ನಲು ಹೇಳುತ್ತಿದ್ದರು. ಯಾಕಿರಬಹುದು ಹೇಳಿ? ಮಕ್ಕಳು ಕೆಂಪು ಹುಟ್ಟಲಿ, ಮಕ್ಕಳ ಬಣ್ಣ ಛಂದ ಆಗಲಿ ಅಂತ ಹೇಳ್ತಿದದನ್ನು ಕೇಳೀವಿ, ಯಾಕಿರಬಹುದು? ಬಹಳ ಸ್ವಾರಸ್ಯಕರ ವಿಚಾರ ನಿಮಗ ತಿಳಿಸ್ತಿನಿ‌. ಒಂದು ಮದುವಿ ವಳಗ ನಾನು ನಮ್ಮ ಕಾಕಾ (ಚಿಕ್ಕಪ್ಪ) ಹರಟಿ ಹೊಡಕೊತ ಕೂತಿದ್ವಿ, ಒಂದು ಹುಡುಗಿ ಕೆಂಪು ಮೈ ಬಣ್ಣ ದಾಕಿದ್ಲು, ಏನ್ವಾ ಫೇರ್ & ಲೌಲಿ ಭಾಳ ಹಚ್ಕೊಂಡಂಗದ ಅದ ಅಂದೆ, ಆ ಹುಡುಗಿ ಇಲ್ರಿ ನಮ್ಮವ್ವ ಡೆಲಿವರಿ ಟೈಮ ನಾಗ ಕೆಂಪ ಮಣ್ಣು ತಿಂದಿದ್ಲಂತ ಅಂತ ಹೇಳಿ ನಕ್ಕೊತ ಹೋದ್ಲು... ಆ ವಿಚಾರ ಅವತ್ತಿಂದ ನನ್ನ ತಲಿ ಕೊರಿಲಿಕ್ಕತ್ತಿತ್ತು. ಆಗ, ಕಾಮಿಡಿ ಅಂತ ನಾನು‌ ನಕ್ಕು ಸುಮ್ಮನಾಗಿದ್ದೆ, ಆದ್ರ ಕೆಲವು ದಿನದ ಹಿಂದ ಹಳ್ಯಾಗ (ಹಳ್ಳಿ ಒಳಗ) ಒಬ್ಬ ಹೆಣ್ಣು ಮಗಳ ೫ ತಿಂಗಳ ಗರ್ಭಿಣಿ ದವಾಖಾನಿಗೆ ಬಂದಿದ್ಲು, ಹೊಟ್ಟಿ ಝಾಡಸ್ತದ ಅಂತ ಹೇಳಿದ್ಲು... ಡಾಕ್ಟರ್ ಪ್ರಶ್ನೆ ಕೇಳಿದ್ರು "ಬ್ಯಾರೆ ಏನರ ತಿಂದಗಿಂದಿ ಏನು? ", ಆಕಿ ಹೇಳಿದ್ಲು, "ನಮ್ಮ ಅವ್ವ ಮಣ್ಣ ತಂದಿದ್ಲರಿ, ನಾನು ತಿಂದಿನ್ರೀ. ಡಾಕ್ಟರ ಕೇಳಿದ್ರು ಎಷ್ಟು ತಿಂದಿ ವಾ? ಆಕಿ, "ಘಮ ಘಮ ವಾಸ ಬಂತ್ರ್ಯಾ ೨ ಚಮಚೆ ತಿಂದೆ", ಅಂತ ನಾಚಕೊತ್ತ ಹೇಳಿದ್ಲು... ಭಾರಿ ಕೆಲಸಾ ಮಾಡಿ ಬಿಡವಾ ಅಂದ ಡಾಕ್ಟರ್, " ನೋಡ ತಂಗಿ, ಒಂದ ಮಾತ ಖರೇ ಹೇಳ ಬೇಕಂದ್ರ , ನಿನ್...

ಭಾಳ ಮಂದಿ ಆಗ್ರೀ...

ನಾವು ಹಳ್ಳಿಯಿಂದ ಬಂದವರು, ಆದರೆ ನಗರದ ಭವ್ಯ ಸೊಬಗಿನೊಳಗೆ ನಮ್ಮ ಗ್ರಾಮ್ಯ ಮೂಲವನ್ನು ಮರೆತ್ತಿದ್ದೇವೆ, ಅಥವಾ ಮರೆಯುತ್ತಿದ್ದೇವೆ. ರಾಷ್ಟ್ರವನ್ನು ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸೂಕ್ಷ್ಮ ಆರ್ಥಿಕ ನಿಲುವುಗಳಲ್ಲಿ ಗ್ರಾಮಗಳನ್ನು ಇಟ್ಟುಕೊಂಡೇ ನಿರ್ಣಯವನ್ನು ತೆಗೆದುಕೊಂಡಿರುತ್ತಾರ.  ಗ್ರಾಮಗಳಲ್ಲಿ ರಾಷ್ಟ್ರದ ಅಭಿವೃದ್ಧಿಯ ಚಿಂತನೆ ಪ್ರಕಟವಾಗದೇ ಇರಬಹುದು, ಆದರೆ ಅವರ ಆಚರಣೆಯಲ್ಲಿ ರಾಷ್ಟ್ರದ ಅಭಿವೃದ್ಧಿಯ ವಿಚಾರ  ಕಾಣಲು ಸಿಗುತ್ತದೆ. ನಗರಗಳಲ್ಲಿ, ನಾವು ಊಟ ಮಾಡುವಾಗ ಮನೆಯ ಬಾಗಿಲ ಹಾಕಿಕೊಂದು ಊಟ ಮಾಡುತ್ತೇವೆ, ಅದು ನಮಗೆ ರೂಢಿ ಆಗಿ ಬಿಟ್ಟಿದೆ. ಆದರೆ ಶರಣರ ಸಂಪ್ರದಾಯದ ನಾಡಾದ ನಮ್ಮ ಕರುನಾಡು, "ಶರಣರ ಬರವೆಮೆಗೆ ಪ್ರಾಣ ಜೀವಾಳವಯ್ಯ" ಎಂಬ ಮೂಲ ವಿಚಾರ, ಮತ್ತು ಮೂಲ ಸಿಧ್ಧಾಂತದಂತೆ ಊಟ ಮಾಡುವಾಗ ಶರಣರ ಪಾಲನ್ನು ತೆಗೆದಿಟ್ಟು ಊಟ ಮಾಡುವದು ವಾಡಿಕೆ ಯಾಗಿದೆ. ಸೂಕ್ಷ್ಮ ವಾಗಿ ಅವಲೋಕಿಸಿ ನೊಡಿದಾಗ, *ಇನ್ನೊಬ್ಬರಿಗೆ ಕೊಟ್ಟು ನಂತರ ನೀನು ತಿನ್ನು* ಎನ್ನುವುದು ಗೂಢಾರ್ಥ. ಗಮನಿಸಬೇಕಾದ ಅಂಶ ಅಂದರೆ, ದೇವರ ಚಿಂತನೆ ಆಮೇಲೆ, ಹಸಿದನನಿಗೆ ಮೊದಲು ಅನ್ನವನ್ನು ಕೊಟ್ಟು ನಂತರ ತಾನು ಊಟಮಾಡಿದರೆ ಪರಮ ಲಾಭ, ಮನೆಗೆ ಹಸಿದುಕೊಂಡು ಬಂದವ, ಅನ್ನವನ್ನು ಕೇಳುವಾಗ ಆ ಧ್ವನಿ "ಅವ್ವಾssssss.... ", " ಎಕ್ಕಾsssss......", ನಮ್ಮ ಮನೆಯಲ್ಲಿ ವಾಸವಾಗಿರುವ ಎಲ್ಲ ಖುಣಾತ್ಮಕ ಶಕ್ತಿಯನ್ನು ಹೊರಗೆಳ...