ಕಾಲು ಕಟ್ಟಿದ ಆನೆ:

ಕಾಲು ಕಟ್ಟಿದ ಆನೆ: 

ಇಂಗ್ಲೀಷ್ ನಿಂದ ಕನ್ನಡಕ್ಕೆ‌ ಅನುವಾದ.

ಲೇಖನ: ಅಮಿತ ಕುಲಕರ್ಣಿ
9972591014

ದೂರದ ಒಂದು ಕ್ಯಾಂಪಿನಲ್ಲಿ (ತಾಂಡಾದಲ್ಲಿ) ಕೆಲವು ಆನೆಗಳನ್ನು ಚಿಕ್ಕ ಸರಪಳಿಯ ಮೂಲಕ ಕಟ್ಟಿ ಸಾಕಿದ್ದರು. ಒಬ್ಬ ದಾರಿ ಹೋಕ, ಎಲ್ಲ ಆನೆಗಳನ್ನು ಗಮನಿಸುತ್ತ ನಿಂತುಕೊಂಡು ವಿಚಾರ ಮಾಡ ತೊಡಗಿದ, "ಅಲ್ಲಾ !! ಆನೆಯನ್ನು ದೊಡ್ಡ ಬೋನಿನಲ್ಲಿ (ಪಂಜರದಲ್ಲಿ) ಯಾಕೆ ಇಟ್ಟಿಲ್ಲಾ, ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದಾರೆ? ಎಂಬ ಪ್ರಶ್ನೆ ತೀವ್ರವಾಗಿ ಕಾಡತೊಡಗೊತು, ಮತ್ತು ಆನೆಗಳು ಏಕೆ ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ, ಎಂಬ ಎರಡನೇ ಪ್ರಶ್ನೆ ಕಾಡತೊಡಗಿತು.

ಆತಾ ದೂರದಲ್ಲಿದ್ದ ಒಬ್ಬ ಮಾವುತನನ್ನು ಕೇಳಲು ಮುಂದಾದನು. "ಹೇ, ಮಾವುತ ರಾಜಾ, ಏನಿದು ರಹಸ್ಯ ಯಾಕೆ ತೆರೆದ ಪ್ರಾಂಗಣದಲ್ಲಿ ಚಿಕ್ಕ ಸರಪಳಿಯಲ್ಲಿ ಕಟ್ಟಿದ್ದೀರಾ? ಅವುಗಳು ಬಿಡಿಸಿಕೊಂಡು ಓಡಲು ಪ್ರಯತ್ನ ಮಾಡಬಹುದಲ್ಲ. ಚಿಕ್ಕ ಸರಪಳಿಯನ್ನು ಬಿಡಿಸಿಕೊಳ್ಳಲು ಎಷ್ಟು ಹೊತ್ತು ಬೇಕು...
ಅದರಿಂದ ಪ್ರಾಣಾಪಾಯ ವಾದರೆ? ಎಂದು ಉದ್ಗಾರ ತೆಗೆದ ದಾರಿ ಹೋಕ.

ಮಾವುತ ಹೇಳಿದ, " ನೋಡಿ, ಅವುಗಳನ್ನು ನಾವು ಚಿಕ್ಕದಿರುವಾಗಲೇ, ಅದೇ ಚಿಕ್ಕ ಸರಪಳಿಯಿಂದ ಕಟ್ಟಿರುತ್ತೇವೆ, ಮತ್ತು ಆ ಸರಪಳಿ ಸಾಕು ಆ ವಯಸ್ಸಿಗೆ, ಬೆಳೆಯುತ್ತ ಬೆಳೆಯುತ್ತ ಅವು ಮಾನಸಿಕವಾಗಿ ಆ ನಂಬಿಕೆಯನ್ನು ದೃಢ ಮಾಡಿಕೊಳ್ಳುತ್ತವೆ. *"ನಮಗೆ ಈ‌ ಸರಪಳಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ"* ಎಂದು. ಹಾಗಾಗಿ ಅವು ಯಾವತ್ತಿಗೂ ತಪ್ಪಿಸಿಕೊಂಡಿಲ್ಲ.

ಈ ಸಂಭಾಷಣೆ ರೂಪದ ಕಥೆ, ನನ್ನ ಜೀವನದಲ್ಲಿ ಬೃಹತ್ತ ಹೆಜ್ಜೆ ಇಡಲು ಕಾರಣವಾಯಿತು. ಐ.ಟಿ. ಯಿಂದ ಕೃಷಿ ಕಡೆಗೆ ಕೇವಲ ಕೆಲವೇ ಜನ ಬರಬಲ್ಲರು, ಮತ್ತು ಸ್ಥಿರವಾಗಿ ಉಳಿದುಕೊಳ್ಳುವರು.
ನಮಗೆ ಅನ್ನಿಸುತ್ತಿರುತ್ತದೆ, ನನಗೆ ಇದನ್ನು ಮಾಡಲಾಗದು, ಸಾಧ್ಯವಾಗದು, ಎಂಬ ಚಿಕ್ಕ ಸರಪಳಿ ಯಿಂದ ನಮ್ಮನ್ನು ನಾವೇ ಕಟ್ಟಿ ಹಾಕಿ ಕೊಂಡಿರುತ್ತೇವೆ.

ಎಷ್ಟೇ ಆದರೂ ಅದು ಆನೆ, ಕ್ರಿಯಾತ್ಮಕವಾಗಿ ವಿಚಾರ ಮಾಡಲಾರದು, ಆದರೆ ನಾವು ಮನುಷ್ಯರು, ಒಂದು ಸ್ವಲ್ಪ ಯೋಚಿಸಿದರೆ, ದೊಡ್ಡ ಹೆಜ್ಜೆ ಇಟ್ಟರೂ ಬದುಕಲು ಆ ಭಗವಂತ ನಮಗೆ ಕ್ರಿಯಾತ್ಮಕ ಶಕ್ತಿ ಯನ್ನು ಕೊಟ್ಟಿದ್ದಾನೆ. ಅಲ್ಲವೇ?

ಈ ಲೇಖನ ನಿಮಗೆ ಸರಿ ಎನಿಸಿದರೆ ನಿಮ್ಮ‌ ಮಿತ್ರರೊಂದಿಗೆ ಹಂಚಿಕೊಳ್ಳಿ.

ಧನ್ಯವಾದಗಳು.
ಜೈ ಭಾರತಾಂಬೆ.

Comments

Popular posts from this blog

ಈ ದಿನದ ಪ್ರೇರಣೆ:

ಭಾಳ ಮಂದಿ ಆಗ್ರೀ...

ಬುತ್ತಿ ರೊಟ್ಟಿ