ಪಾಶ್ಚಿಮಾತ್ಯರು ಕಂಡ ಕೃಷಿ
ಏಕೆ ಕೃಷಿ ಇಲಾಖೆಗಳು ಏಕ ಬೆಳೆ ಪಧ್ಧತಿಗೆ ಒತ್ತು ಕೊಡುತ್ತವೆ ಅನ್ನೋದಕ್ಕೆ ಇಲ್ಲಿದೆ ಈ ಬೈಬಲ್ ನಲ್ಲಿನ ವಿಚಾರ... ಸರಿಯೋ ತಪ್ಪೋ ನಾವೇ ವಿಚಾರ ಮಾಡುವ ಸಂಗತಿ. ಅದು ಸರಿ ಅನಿಸಿದವರಿಗೆ ಸರಿ, ತಪ್ಪು ಅನ್ನಿಸಿದವರು ಸರಿ ಪಡಿಸಿಕೊಳ್ಳೊಣ.
ಅಕ್ವಿಲಾ ಕ್ಯಾರೆನ್, ಅವರ ಸಂವಾದ ಗಮನವಿಟ್ಟು ಕೇಳಿಸಿಕೊಳ್ಳಿ, ಎಸು ಭಗವಾನರ ಚಿಂತನೆಗಳೊಂದಿಗೆ ಕೃಷಿ ಪಧ್ಧತಿ ಯನ್ನೂ ಕೂಡ ಅವರು ಪ್ರತಿಪಾದಿಸಿದ ಉಲ್ಲೇಖ ಬೈಬಲ ನಲ್ಲಿ ಸಿಗುತ್ತದೆ.
ಪಶ್ಚಿಮದಲ್ಲಿ ಏಸು ಭಗವಾನರು ಈ ವಿಷಯ ಅಂದರೆ (ಏಕ ಬೆಳೆ ಪದ್ದತಿ) ಗೆ, ಒತ್ತು ಕೊಟ್ಟು ಹೇಳಿದರು, ಪಾಶ್ಚಿಮಾತ್ಯರು ಪಾಲಿಸಿದರು. ಕಾರಣ ನೂರು ಇರಬಹುದು, ಆದರೆ ಅದನ್ನು ಅಧ್ಯಯನ ಮಾಡಿ ಬಂದ ಭಾರತೀಯ ಕೃಷಿ ತಜ್ಞರು ಅದೇ ಪದ್ಧತಿಯನ್ನು ಭಾರತದಲ್ಲಿ ಪ್ರತಿಪಾದಿಸಿದರು ಎಂಬುದು ಪ್ರಸ್ತುತ ಕಂಡು ಬರುತ್ತದೆ.
ನಮ್ಮ ಭಾರತೀಯ ಕೃಷಿ ಪಧ್ಧತಿಯಲ್ಲಿ ವಿವಿಧತೆ ಅಂದರೆ ಮಿಶ್ರ ಬೆಳೆ ಪಧ್ಧತಿ ಇತ್ತು, ಆದರೆ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ಬೆಳೆ, ಮಳೆ, ನೆಲ, ಜಲ, ಸಂಪನ್ಮೂಲಗಳ ಬಳಕೆ, ದುರ್ಬಳಕೆ ಯ ಉದಾಹರಣೆ ಇನ್ನೂ ಕಾಣ ಸಿಗುತ್ತವೆ. ಬೇಡಿಕೆ ಗಿಂತ ಅಧಿಕ ಉತ್ಪಾದನೆ ಮಾಡುವುದು ಮತ್ತು ಅಧಿಕ ಬೇಡಿಕೆ ನಿರ್ಮಾಣ ಮಾಡುವುದು, ಅದನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡುವುದು, ಅದಕ್ಕೆ (ಡೈನಾಮಿಕ ಮಾರ್ಕೆಟಿಂಗ್) ಎಂಬ ಹೆಸರು ಕೊಟ್ಟು ನಮ್ಮ ಯುವಕರನ್ನೂ ದಾರಿ ತಪ್ಪಿಸಿದ ಉದಾಹರಣೆಗೆ ಕಾಣ ಸಿಗುತ್ತದೆ. ಇವೆಲ್ಲವನ್ನೂ ನಾವು ತಿಳಿದುಕೊಳ್ಳಲು ಇನ್ನೂ ಎಷ್ಟು ದಿನ ಬೇಕು? ನಾವು ನೈಸರ್ಗಿಕ ಕೃಷಿಯತ್ತ ಸಾಗುವುದು ಯಾವಾಗ?
ಎಲ್ಲರಿಗೂ ಅನ್ನ ಕೊಡುವಷ್ಟು ನಮ್ಮ ಭೂ ಮಾತೆ ಅರ್ಹಳಿದ್ದಾಳೆ, ಆದರೆ ನಾವು ನೋಡುವ ದೃಷ್ಟಿ ಕೋಣ ಮಾತ್ರ ಬದಲಾಯಿಸಿಕೊಳ್ಳಬೇಕು ಅಷ್ಟೇ.
ನಾನು ಬರೆದಿರುವ ಲೇಖನ ಸರಿಯೋ ತಪ್ಪೋ ಎಂಬುದು ತಿಳಿಸಿ, ಮತ್ತು ಇದರ ಮಾರ್ಮಿಕತೆ ಕುರಿತಾದ ಚಿಂತನೆ ಆಗಬೇಕೆ?
ತಿಳಿಸಿ.
ಅಮಿತ ಕುಲಕರ್ಣಿ
9972591014
Comments
Post a Comment