ಮಣ್ಣಿನಿಂದಾದ ಈ ಶರೀರ

ಲೇಖನ: ಅಮೀತ ಕುಲಕರ್ಣಿ

೯೯೭೨೫೯೧೦೧೪


ಮೊದಲು ಗರ್ಭಿಣಿಯರಿಗೆ ಒಂದು ಚಿಟಿಗೆ ಕೆಂಪು ಮಣ್ಣು ತಿನ್ನಲು ಹೇಳುತ್ತಿದ್ದರು. ಯಾಕಿರಬಹುದು ಹೇಳಿ?

ಮಕ್ಕಳು ಕೆಂಪು ಹುಟ್ಟಲಿ, ಮಕ್ಕಳ ಬಣ್ಣ ಛಂದ ಆಗಲಿ ಅಂತ ಹೇಳ್ತಿದದನ್ನು ಕೇಳೀವಿ, ಯಾಕಿರಬಹುದು?

ಬಹಳ ಸ್ವಾರಸ್ಯಕರ ವಿಚಾರ ನಿಮಗ ತಿಳಿಸ್ತಿನಿ‌. ಒಂದು ಮದುವಿ ವಳಗ ನಾನು ನಮ್ಮ ಕಾಕಾ (ಚಿಕ್ಕಪ್ಪ) ಹರಟಿ ಹೊಡಕೊತ ಕೂತಿದ್ವಿ, ಒಂದು ಹುಡುಗಿ ಕೆಂಪು ಮೈ ಬಣ್ಣ ದಾಕಿದ್ಲು, ಏನ್ವಾ ಫೇರ್ & ಲೌಲಿ ಭಾಳ ಹಚ್ಕೊಂಡಂಗದ ಅದ ಅಂದೆ, ಆ ಹುಡುಗಿ ಇಲ್ರಿ ನಮ್ಮವ್ವ ಡೆಲಿವರಿ ಟೈಮ ನಾಗ ಕೆಂಪ ಮಣ್ಣು ತಿಂದಿದ್ಲಂತ ಅಂತ ಹೇಳಿ ನಕ್ಕೊತ ಹೋದ್ಲು...

ಆ ವಿಚಾರ ಅವತ್ತಿಂದ ನನ್ನ ತಲಿ ಕೊರಿಲಿಕ್ಕತ್ತಿತ್ತು. ಆಗ, ಕಾಮಿಡಿ ಅಂತ ನಾನು‌ ನಕ್ಕು ಸುಮ್ಮನಾಗಿದ್ದೆ, ಆದ್ರ ಕೆಲವು ದಿನದ ಹಿಂದ ಹಳ್ಯಾಗ (ಹಳ್ಳಿ ಒಳಗ) ಒಬ್ಬ ಹೆಣ್ಣು ಮಗಳ ೫ ತಿಂಗಳ ಗರ್ಭಿಣಿ ದವಾಖಾನಿಗೆ ಬಂದಿದ್ಲು, ಹೊಟ್ಟಿ ಝಾಡಸ್ತದ ಅಂತ ಹೇಳಿದ್ಲು... ಡಾಕ್ಟರ್ ಪ್ರಶ್ನೆ ಕೇಳಿದ್ರು "ಬ್ಯಾರೆ ಏನರ ತಿಂದಗಿಂದಿ ಏನು? ", ಆಕಿ ಹೇಳಿದ್ಲು, "ನಮ್ಮ ಅವ್ವ ಮಣ್ಣ ತಂದಿದ್ಲರಿ, ನಾನು ತಿಂದಿನ್ರೀ.

ಡಾಕ್ಟರ ಕೇಳಿದ್ರು ಎಷ್ಟು ತಿಂದಿ ವಾ? ಆಕಿ, "ಘಮ ಘಮ ವಾಸ ಬಂತ್ರ್ಯಾ ೨ ಚಮಚೆ ತಿಂದೆ", ಅಂತ ನಾಚಕೊತ್ತ ಹೇಳಿದ್ಲು... ಭಾರಿ ಕೆಲಸಾ ಮಾಡಿ ಬಿಡವಾ ಅಂದ ಡಾಕ್ಟರ್, " ನೋಡ ತಂಗಿ, ಒಂದ ಮಾತ ಖರೇ ಹೇಳ ಬೇಕಂದ್ರ , ನಿನ್ನ ಗಂಡನ ಬಣ್ಣ ಏನ ಐತ್ಯಲ್ಲಾ ಅದ ಬರ್ತೈತಿ, ಮಣ್ಣ ಗಿಣ್ಣ ತಿನಬ್ಯಾಡಾ"... "ಅದಕ್ಕ ರೀ, ಸಾಯಬ್ರ, ನಮ್ಮವ್ವಾ ಕೆಂಪ ಮಣ್ಣ ಕೊಟ್ಟಾಳ್ರೀ...!! ಅವ ಕರ್ರಗ ಅದಾನ ರೀ ಅಂದ್ಲು... ನಗು ತಡೀಲಿಲ್ಲ, ಜೋರಾಗಿ ನಕ್ಕರ, ಮನಸಿಗೆ ಹತ್ತಿ ಗಿತ್ತಿತ್ತು, ಅಂತ ನಗು ಕಂಟ್ರೋಲ ಮಾಡೀದೆ... ಹೆಂಥಾ ಫಜೀತಿ ಅಂತೀನಿ.

ಇರಲಿ, ನಾನು ಶೀರ್ಷಿಕೆಯ ವಸ್ತುಗೆ ಬರ್ತಿನಿ, ಮಣ್ಣು ತಿನ್ನುವ ಹಿಂದೆ ಇರುವ ವಿಜ್ಞಾನ ಹಿರಿಯರು ಈ ರೀತಿಯಾಗಿ ಕಂಡುಕೊಂಡಿದ್ದರು, ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು, ಸೂಕ್ಷ್ಮ ಜೀವಿಗಳೂ ಸಹ ಇರ್ತಾವ ಅಂತ ಓದಿದ್ದೆ, ಅದನ್ನ ಒಂದು ಚಿಟಿಗೆ ಸೇವಿಸುವುದರಿಂದ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಬಲ ಸಿಗುತ್ತದೆ, ಅದರಿಂದ ಪಾಚನ ಪ್ರಕ್ರಿಯೆ ಸುಧಾರಿಸುತ್ತದೆ, ( Fixing Gut Bacteria) ಅಂತ ಈಗಿನ ವಿಜ್ಞಾನ ಹೇಳ್ತದ, (ಗ್ಯಸ್ಟ್ರಿಕ ಟ್ರಬಲ್, ಕಾಂಸ್ಟಿಪೇಷನ್, ಇಂಡೈಜೇಷನ್) ಹಿಂತಾ ಸಮಸ್ಯೆಗಳು ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಂಡು ಬರುತ್ತದೆ, ಹಿಂಗಾಗಿ ಮೊಸರು, ಹಾಲು, ಹೈನ, ತುಪ್ಪ ಇತ್ಯಾದಿ ಎಲ್ಲ ಬಳಸಲಿಕ್ಕೆ ಹೇಳ್ತಾರ, ಜೊತೆಗೆ antibiotics ತೊಗೊಂಡು ಎಲ್ಲ ಬ್ಯಾಕ್ಟೀರಿಯಾ ಗಳು ನಿಸ್ತೇಜ ಗೂಂಡಿರ್ತವ. ಆಗ ಆ ಸಮಸ್ಯೆಗೆ ಮಣ್ಣಿನ ಮೂಲಕ ಈ ಎಲ್ಲ ಪೋಷಕ ತತ್ವಗಳು ಹೊಟ್ಟಿಗೆ ಸೇರಿ, ಪಾಚನ ಕ್ರೀಯೆ ಸುಧಾರಿಸುವುದರ ಮೂಲಕ ಧನಾತ್ಮಕ ಚಿಂತನೆಗಳು ಬರುವುವು. ಜೊತೆಗೆ ಮಗುವಿನ ಮೇಲೆ ಒಳ್ಳೆ ಪರಿಣಾಮ ಬೀರುವುದು ಸಹಜ.

ಮಣ್ಣಿನಿಂದಾದ ಈ ಶರೀರ ಅನ್ನುವುದನ್ನು ಇಲ್ಲಿ ಈ ರೀತಿಯಾಗಿ ತಿಳಿದುಕೊಳ್ಳಬಹುದು.

ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ, ಮತ್ತು ಈ ರೀತಿಯಾದ ನಮ್ಮ ಹಿರಿಯರ ಜ್ಞಾನವನ್ನು ವೈಜ್ಞಾನಿಕ ರೈತಿಯಲ್ಲಿ ತಿಳಿದುಕೊಂಡರೆ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡಬಹುದು.

Comments

  1. ಒಳ್ಳೆಯ ಬರವಣಿಗೆ. ಹೀಗೆ ತಮ್ಮ ಬರಹದ ಹವ್ಯಾಸ ಮುಂದುವರಿಸಿ

    ReplyDelete

Post a Comment

Popular posts from this blog

ಈ ದಿನದ ಪ್ರೇರಣೆ:

ಭಾಳ ಮಂದಿ ಆಗ್ರೀ...

ಬುತ್ತಿ ರೊಟ್ಟಿ