ಭಾಳ ಮಂದಿ ಆಗ್ರೀ...
ನಾವು ಹಳ್ಳಿಯಿಂದ ಬಂದವರು, ಆದರೆ ನಗರದ ಭವ್ಯ ಸೊಬಗಿನೊಳಗೆ ನಮ್ಮ ಗ್ರಾಮ್ಯ ಮೂಲವನ್ನು ಮರೆತ್ತಿದ್ದೇವೆ, ಅಥವಾ ಮರೆಯುತ್ತಿದ್ದೇವೆ. ರಾಷ್ಟ್ರವನ್ನು ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸೂಕ್ಷ್ಮ ಆರ್ಥಿಕ ನಿಲುವುಗಳಲ್ಲಿ ಗ್ರಾಮಗಳನ್ನು ಇಟ್ಟುಕೊಂಡೇ ನಿರ್ಣಯವನ್ನು ತೆಗೆದುಕೊಂಡಿರುತ್ತಾರ.
ಗ್ರಾಮಗಳಲ್ಲಿ ರಾಷ್ಟ್ರದ ಅಭಿವೃದ್ಧಿಯ ಚಿಂತನೆ ಪ್ರಕಟವಾಗದೇ ಇರಬಹುದು, ಆದರೆ ಅವರ ಆಚರಣೆಯಲ್ಲಿ ರಾಷ್ಟ್ರದ ಅಭಿವೃದ್ಧಿಯ ವಿಚಾರ ಕಾಣಲು ಸಿಗುತ್ತದೆ. ನಗರಗಳಲ್ಲಿ, ನಾವು ಊಟ ಮಾಡುವಾಗ ಮನೆಯ ಬಾಗಿಲ ಹಾಕಿಕೊಂದು ಊಟ ಮಾಡುತ್ತೇವೆ, ಅದು ನಮಗೆ ರೂಢಿ ಆಗಿ ಬಿಟ್ಟಿದೆ. ಆದರೆ ಶರಣರ ಸಂಪ್ರದಾಯದ ನಾಡಾದ ನಮ್ಮ ಕರುನಾಡು, "ಶರಣರ ಬರವೆಮೆಗೆ ಪ್ರಾಣ ಜೀವಾಳವಯ್ಯ" ಎಂಬ ಮೂಲ ವಿಚಾರ, ಮತ್ತು ಮೂಲ ಸಿಧ್ಧಾಂತದಂತೆ ಊಟ ಮಾಡುವಾಗ ಶರಣರ ಪಾಲನ್ನು ತೆಗೆದಿಟ್ಟು ಊಟ ಮಾಡುವದು ವಾಡಿಕೆ ಯಾಗಿದೆ.
ಸೂಕ್ಷ್ಮ ವಾಗಿ ಅವಲೋಕಿಸಿ ನೊಡಿದಾಗ, *ಇನ್ನೊಬ್ಬರಿಗೆ ಕೊಟ್ಟು ನಂತರ ನೀನು ತಿನ್ನು* ಎನ್ನುವುದು ಗೂಢಾರ್ಥ. ಗಮನಿಸಬೇಕಾದ ಅಂಶ ಅಂದರೆ, ದೇವರ ಚಿಂತನೆ ಆಮೇಲೆ, ಹಸಿದನನಿಗೆ ಮೊದಲು ಅನ್ನವನ್ನು ಕೊಟ್ಟು ನಂತರ ತಾನು ಊಟಮಾಡಿದರೆ ಪರಮ ಲಾಭ,
ಮನೆಗೆ ಹಸಿದುಕೊಂಡು ಬಂದವ, ಅನ್ನವನ್ನು ಕೇಳುವಾಗ ಆ ಧ್ವನಿ "ಅವ್ವಾssssss.... ", " ಎಕ್ಕಾsssss......", ನಮ್ಮ ಮನೆಯಲ್ಲಿ ವಾಸವಾಗಿರುವ ಎಲ್ಲ ಖುಣಾತ್ಮಕ ಶಕ್ತಿಯನ್ನು ಹೊರಗೆಳೆಯ ತೆಗೆದು ತಮ್ಮೊಡನೆ ತೆಗೆದುಕೊಂಡು ಹೋಗುತ್ತದೆ. ಅದು ಹೇಗೆ, ಅಂದ್ರಾ? ನಮಗೆ ದರಿದ್ರತನದ ಎಚ್ಚರಿಕೆ ಕೊಟ್ಟು, ಜಾಗೃತ ಪಡಿಸುತ್ತದೆ, ನೀನು ಕೂತು ಉಂಡರೆ ನಿನಗೂ ಅದೇ ಗತಿ ಎಂದು. ಒಮ್ಮೆ ಮನಸ್ಸಿಗೆ ಅದು ತಿಳಿದಾಗ ಅವನಿಗೆ ದಿನದ ಆದಾಯದ ೧ ಪಾಲು ಕೊಟ್ಟು ಕಳಿಸುವುದರಿಂದ ಪರಮಾತ್ಮ ತೃಪ್ತನಾಗುತ್ತಾನೆ, ಮತ್ತು ದೇಶದಲ್ಲಿ ಹಸಿದುಕೊಂಡಿರುವವರ ಸಂಖ್ಯೆ ಕಡಿಮೆಯಾಗುತ್ತದೆ. ರಾಷ್ಟ್ರದ ಆರ್ಥಿಕ ಹೊರೆ ಕುಗ್ಗುತ್ತದೆ.
ಈಗ ಶಿeರ್ಶಿಕೆಯ ವಿಚಾರಕ್ಕೆ ಬರೋಣ, "ಭಾಳ ಮಂದಿ ಆಗ್ರೀ...",
ಇದನ್ನು ನಾವು ಗ್ರಾಮಗಳಲ್ಲಿ ಅಧಿಕ ಪ್ರಯೋಗ ಮಾಡುವದನ್ನ ಕಂಡಿದ್ದೇವೆ, ಭಾಳ ಮಂದಿ ಆಗ್ರೀ ಅಂದರೆ, ಇನ್ನೊಬ್ಬರಿಗೆ ಅನ್ನ ಕೊಡುವ ನಿಮ್ಮ ಕೈ , ಹತ್ತು ಕೈ ಗಳಾಗಲಿ, ಅಂದರೆ ನಿಮ್ಮ ಕುಟುಂಬ ವೃಧ್ಧಿ ಯಾಗಲಿ, ಎಂಬರ್ಥ. ಇನ್ನೂ ಒಂದು ಹೆಜ್ಜೆ ಒಳಕ್ಕೆ ಹೋದಂಗೆ ಈ ಅರ್ಥ ಬರ್ತದೆ, "ನಿಮ್ಮಂಥ ಕೊಡುವ ಮನಸ್ಸು ಉಳ್ಳವರ ಸಂತತಿ ಅಧಿಕ ಗೊಳ್ಳಲಿ, ಅದೇ ರೀತಿ ನಿಮ್ಮ ಕುಟುಂಬ ದಲ್ಲಿ ಮುಂದಿನ ತಲೆಮಾರು ಸಹ, ದಾನ ಕೊಡುವ ಸಂಸ್ಕಾರದವರು ಹುಟ್ಟಿ ಬರಲಿ ಎಂದು. ನೋಡಿ ಈ ಒಂದು ವಿಚಾರ ಎಷ್ಟು ಅರ್ಥ ಗರ್ಭಿತ ವಾಗಿದೆ. ನಾವೂ ಸಹ ಯಾರಾದರೂ ಊಟಕ್ಕೆ ಕರೆದರೆ ಈ ಚಿಂತನೆಯನ್ನ ಪ್ರಯೋಗ ಮಾಡ ಬಹುದೇ.
ಬನ್ನಿ ಹಸಿವು ಮುಕ್ತ ಭಾರತ ನಮ್ಮದಾಗಲಿ, ಎಲ್ಲರೂ ಕಾಯಕ ಯೋಗಿಗಳಾಗಲಿ, ನಮ್ಮ ರೈತರು ಕೊಡುವ ಕೈ ಗಳಾಗಲಿ, ಯಾರ ಹತ್ತಿರವೂ ಭಿಕ್ಷೆ ಬೇಡುವ ಸ್ಥಿತಿ ಬರದಿರಲಿ ಎಂಬುದು ನನ್ನ ಮನದಾಳದ ಆಶಯ.
ಸರ್ವೆ ಜನಾ: ಸುಖಿನೋ ಭವಂತು.
ಅಮೀತ ಕುಲಕರ್ಣಿ
9972591014
ಚಿಕ್ಕನಂದಿ, ಗೋಕಾಕ
Olleya paddati Iron Irlike helona
ReplyDeleteಇಂತಹ ನುಡಿಗಳ ಒಳಾರ್ಥವನ್ನು ಚೆನ್ನಾಗಿ ವಿವರಿಸಿದ್ದೀರಿ.
ReplyDeleteಬಹಳ ಅರ್ಥ ಘರ್ಭಿತ ಲೇಖನ. ಓದುವವರಿಗೆ ಲೇಖನ, ತಿಳಿದುಕೊಂಡವರಿಗೆ ತತ್ವ. ನಿಮ್ಮ ಬರವಣಿಗೆ ಹೀಗೆ ಫಲಪ್ರದಾಯಕವಾಗಿ ಮುಂದುವರೆಯಲಿ🙏🏻🙏🏻
ReplyDeleteಸುಂದರವಾದ ಲೇಖನ ಚೆನ್ನಾಗಿದೆ
ReplyDeleteVery meaningful and its fact
ReplyDelete