ಕಡು ಬಿಸಿಲಿನ ನಾಡಿನಲಿ ಗೋಚರಿಸಿದ ಗೋ-ಸ್ವರ್ಗ
ಕಡು ಬಿಸಿಲಿನ ನಾಡಿನಲಿ ಗೋಚರಿಸಿದ ಗೋ-ಸ್ವರ್ಗ
-ಮಾಧವ ಗೋ-ಶಾಲೆ.
-----------------------------
ಶ್ರೀ ಶರಣ ಬಸವೇಶ್ವರರ ತತ್ವದ ನಾಡಾದ ಕಲ್ಬುರ್ಗಿ, ಒಂದು ಪುಣ್ಯದ ನಗರಿ, ಶರಣರು ಹೇಳುವಂತೆ ಎಲ್ಲಿ ಗೋ-ಮಾತೆಗೆ ಗೌರವ ಸಿಗುತ್ತದೆ, ಯಾವ ಭೂ-ಭಾಗದ ಮೇಲೆ ಗೋವುಗಳು ವಾಸ ಮಾಡುತ್ತವೆಯೋ, ಆ ನಾಡು ಸ್ವರ್ಗಕ್ಕೆ ಸಮ ಎಂದು ಸಾರಿದ್ದಾರೆ. ಅಲ್ಲಿನ ಜನ ನೀವು ನಿಜವಾಗಿಯೂ ಧನ್ಯರು.
ಕಾರಣ ಗೋ-ಸಂತತಿಯ ರಕ್ಷಣೆ ಮತ್ತು ಅಭಿವೃಧ್ಧಿ , ಎರಡೂ ಈ ನೆಲದ ಮೇಲೆ ಅವ್ಯಾಹತವಾಗಿ ನಡೆಯುತ್ತಿದೆ. ವೃಧ್ಧ, ಪೆಟ್ಟಾದ, ರೋಗದಿಂದ ಬಳಲಿದ, ಮನುಷ್ಯನ ದುರ್ಬುಧ್ಧಿಗೆ ತುತ್ತಾದ, ಮತ್ತು ಕಟುಕರ ಕೈಗೆ ಸಿಕ್ಕು ಸಾಯಬೇಕಾದ ಹಸುಗಳನ್ನು ರಕ್ಷಿಸಿ ಇಲ್ಲಿ ತಂದು ಬಿಡಲಾದ, ಗೋ-ಸಂತತಿಗಳ ಸಮಾಗಮವೇ "ಮಾಧವ ಗೋ-ಶಾಲೆ".
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ಗ್ರಾಮದ ಗುರು ಹಿರಿಯರ ಮಾರ್ಗ ದರ್ಶನದಲ್ಲಿ ನಿರಂತರವಾಗಿ ನಿರ್ವಹಿಸುತ್ತಿರುವ ಏಕೈಕ ಗೋ-ಶಾಲೆ ಎಂದರೆ ತಪ್ಪಾಗಲಾರದು. ಗೋ-ಸಂತತಿಗೆ ಧಕ್ಕೆಯಾಗದ ಹಾಗೆ ಅವುಗಳಿಗೆ ವಾಸ ಸ್ಥಾನ, ಆಹಾರಕ್ಕೆ ಮೇವು, ಸತತವಾಗಿ ದೊರಕುವಂತೆ ನೋಡಿಕೊಳ್ಳುವ ಗೋ-ಸೇವಕರು, ಪಾಲಕರು ಸಾಮಾನ್ಯರಲ್ಲಿ ಅಸಮಾನ್ಯರು. ಶ್ರೀಯುತ ಮಹೇಶ ಬೀದರಕರ ರವರ ಉತ್ಸಾಹ, ನಿಜವಾಗಿಯೂ ಪ್ರೇರಣೆ ತುಂಬುವಂಥಹದು.
"ಗಾವೋ ವಿಶ್ವಸ್ಯ ಮಾತರ:", ಎಂಬ ನುಡಿಯನ್ನು ಸಾಕಾರ ಗೊಳಿಸುತ್ತಿರುವ ಇವರ ತಂಡವನ್ನು ನೋಡಿದರೆ, ಅನೇಕ ನವ ಯುವಕರಲ್ಲಿ ಹೊಸದೊಂದು ಮಾಡುವ ಸ್ಪೂರ್ತಿ ಸಿಗುತ್ತದೆ. ತಾವು ಇವರ ಗೋಶಾಲೆ ನೋಡಲೇ ಬೇಕು...
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎಂದು ಕೇಳಿದರೆ, ಜೋಗದ ಗುಂಡಿ ಎಂದು ಹೇಳುವುದು ಹಳೆಯ ಮಾತಾದರೆ, ಮಾಧವ ಗೋ-ಶಾಲೆಯನ್ನು ಒಮ್ಮೇಯಾದರೂ ನೋಡಲೇ ಬೇಕು ಎಂಬುದು ನವ ನುಡಿ. ಇರಲಿ, ಕೆಲವರಿಗೆ ಇದು ಹೊಗಳಿಕೆ ಎನಿಸಬಹುದು, ಅದರೆ, ನೈಜ್ಯತೆ ಕಂಡವರಿಗೆ ಮಾತ್ರ ಇದು ಯಾವುದು ಉತ್ಪ್ರೇಕ್ಷೆ ಎನ್ನಿಸುವದಿಲ್ಲ.
ಕಲ್ಬುರ್ಗಿ ಗೆ ನೀವು ನಿಮ್ಮ ಕೆಲಸಕ್ಕೆ ಹೋಗುವುದಾದರೆ ದಯವಿಟ್ಟು ಮಾಧವ ಗೋ-ಶಾಲೆಗೂ ಕೂಡ ನಿಮ್ಮ ಭೇಟಿ ಹಾಕಿಕೊಳ್ಳಿ, ನಿಮ್ಮ ಜೀವನಕ್ಕೆ ಒಂದು ಹೊಸ ಪ್ರೇರಣೆ ಸಿಗಬಹುದು.
ಸಂಪರ್ಕ: ಶ್ರೀ ಮಹೇಶ ಬೀದರಕರ, ಕಲ್ಬುರ್ಗಿ
http://www.madhavgaushala.com
9449838931
ಅನಿಸಿಕೆಗಳ ಮಾಲಿಕೆ ೧೧,
-- ಗೋ-ಸೇವಕ,
ಅಮಿತ ಕುಲಕರ್ಣಿ
ಸಾವಯವ ಕೃಷಿಕರು
ಚಿಕ್ಕನಂದಿ ಗ್ರಾಮ, ಗೋಕಾಕ ತಾ, ಬೆಳಗಾವಿ ಜಿ.
9972591014
Comments
Post a Comment